ಪರದೇಸಿ ಕೇಳಿದ ಪ್ರತಿಧ್ವನಿ
Authors:
ಆ ರಾತ್ರಿ ಗಡಗಡ ನಡುಗುವ ಚಳಿ. ಆದರೂ ಪರದೇಸಿಗೆ ಮನೆಗೆ ಹೋಗುವ
ಮನಸ್ಸಿರಲಿಲ್ಲ. ಮಿತ್ರರಾದ ಮಂದ್ರ ಹಾಗೂ ಬೆಡೊಮಿ ಜೊತೆ ಬೀದಿದೀಪದ
ಸುತ್ತ ಸುತ್ತುತ್ತಿರುವಾಗ ಅವನ ಕಣ್ಣುಗಳು ಫಳ ಫಳ ಹೊಳೆಯುತ್ತಿದ್ದವು.
ಸಣ್ಣಗೆ ಮಳೆ ಜಿನುಗುತ್ತಿದ್ದರೂ ಹುಳುಗಳು ತಮ್ಮ ಆಟ ಮುಂದುವರಿಸಿದ್ದವು.
ಬಾವಲಿ ಮರಿಗಳಿಗೆ ಇದು ಹುಳು ತಿನ್ನಲು ಹೇಳಿ ಮಾಡಿಸಿದ ಸಮಯವಾಗಿತ್ತು.
ಪರದೇಸಿಗಂತೂ ಸೊಳ್ಳೆ ಊಟವೆಂದರೆ ಪಂಚಪ್ರಾಣ.
“ಆ...ಆ... ಆಂ! ನನಗೆ ಮತ್ತೊಂದು ಸಿಕ್ಕಿತು!” ಎಂದು ಆತ ಹಾಡುತ್ತಿದ್ದ.
ಮೂವರು ಮಿತ್ರರ ನಡುವೆ ಒಂದು ಗಂಟೆಯಲ್ಲಿ ಯಾರು ಹೆಚ್ಚು ಸೊಳ್ಳೆ ತಿನ್ನುತ್ತಾರೆ ಎಂಬ ಹೊಸ ಆಟ ಶುರುವಾಗಿತ್ತು!
ಆಟ ಶುರುವಾದ ಅರ್ಧ ಗಂಟೆಯಲ್ಲೇ ಪರದೇಸಿ 150 ಸೊಳ್ಳೆ ಗುಳುಂ ಮಾಡಿದ್ದ.
ಖಂಡಿತ ಇದು ಆತನ ಪಾಲಿಗೆ ಶುಭರಾತ್ರಿಯೇ!
ದಿಢೀರನೇ ಆತನ ಕಿವಿಗಳು ಗುಂಯ್ ಗುಟ್ಟ ತೊಡಗಿದವು. ಕೂಡಲೇ ತಲೆಸುತ್ತಿ ನೆಲಕ್ಕೆ ಬೀಳತೊಡಗಿದ.
ದೊಡ್ಡ ಬಾವಲಿ ಬೆಡೊಮಿ ಸರಕ್ಕನೆ ಪರದೇಸಿ ಬಳಿ ಬಂದು ಕೇಳಿದಳು.
“ಏನಾಯ್ತು? ನೀನು ಆರಾಮಾಗಿದಿಯಾ ತಾನೆ?” “ಉಹೂಂ... ಅಯ್ಯೋ... ನನ್ನ ಕಿವಿ...”
ಎಂದು ಪರದೇಸಿ ನೋವಿನಿಂದ ಕೂಗಿದ. ಕಿವಿ ಹಿಡಿದುಕೊಂಡು ಗಾಳಿಯಲ್ಲೇ ಉರುಳು ಹೊಡೆಯುತ್ತಾ ಹತ್ತಿರದ ಮರದ ಕೊಂಬೆಯತ್ತ ಸರಿದು, ತಲೆಕೆಳಗಾಗಿ ಜೋತು ಬಿದ್ದ. “ಅಯ್ಯೋ... ತುಂಬಾ ನೋಯ್ತಿದೆ!” ಎಂದು ಅಳತೊಡಗಿದ.
ಬೆಡೊಮಿ ಪರದೇಸಿಯ ಜೊತೆ ಇದ್ದು ಅವನಿಗೆ ಧೈರ್ಯ ತುಂಬುತ್ತಿದ್ದರೆ, ಮಂದ್ರ ಅವನ ಅಮ್ಮನನ್ನು ಕರೆತರಲು ಹೋದ.
ಪರದೇಸಿಗೆ ವಿಚಿತ್ರ ನೋವು, ತಲೆಸುತ್ತು ಬರುತ್ತಿತ್ತು. ಕಿವಿಗಳು ಪಟಪಟ ಬಡಿದುಕೊಳ್ಳುತ್ತಿದ್ದವು.
ಅವು ಹಾಗೆ ಬಡಿದುಕೊಳ್ಳುವಾಗೆಲ್ಲ ಕಿವಿ ಹರಿದು ಹೋದಂತೆ ನೋವಾಗುತ್ತಿತ್ತು.
ಬೆಡೊಮಿ ತನ್ನ ಚುರುಕು ಕಿವಿಗಳನ್ನು ಗಾಳಿಗೆ ಆನಿಸಿ ಪರದೇಸಿಯ ಅಮ್ಮ ಬಂದಳೇ ಎಂದು ಗಮನಿಸಿದಳು. ಹಕ್ಕಿ, ಕಪ್ಪೆ, ಸರೀಸೃಪಗಳು ಮತ್ತು ಕೆಲವೊಮ್ಮೆ ಗಾಯಗೊಂಡ ಬಾವಲಿಗಳನ್ನೂ ಬೇಟೆಯಾಡಿ ತಿನ್ನುವ ಲೈರಾ ಬಾವಲಿಯ ಕಣ್ಣಿಗೆ ಬಿದ್ದರೆ ಪರದೇಸಿ ಕಥೆ ಮುಗಿದಂತೆಯೇ ಎಂಬ ಭಯ ಆಕೆಗೆ. ತನ್ನ ದೊಡ್ಡ ರೆಕ್ಕೆ ಬಿಚ್ಚಿ ಪರದೇಸಿಯನ್ನು ಬಚ್ಚಿಟ್ಟುಕೊಂಡಳು.
ಮಂದ್ರ ಪರದೇಸಿಯ ಅಮ್ಮನನ್ನು ಕರೆತರುತ್ತಲೇ, ಅಮ್ಮ ಅವನನ್ನು ಡಾಕ್ಟರ್ ಬಳಿ ಕರೆದೊಯ್ದರು.
ಡಾಕ್ಟರ್ ಎಲಾ, ಪರದೇಸಿಯ ಕಿವಿಗಳನ್ನು ಪರೀಕ್ಷಿಸಿದರು.
ತಲೆ ಕೊಡವುತ್ತಾ, “ಪರದೇಸಿ ಪುಟ್ಟಾ, ನಿನ್ನ ಕಿವಿಗಳಿಗೆ ತುಂಬಾ ಶೀತವಾಗಿದೆ. ನಾವು, ಕಪಟ ಬಾವಲಿಗಳು; ಮಳೆಯಲ್ಲಿ ನೆನೆಯಬಾರದು ಎಂದು ಗೊತ್ತಿಲ್ಲವೇ
ನಿನಗೆ?” ಎಂದರು.
ನಿನಗೆ?” ಎಂದರು.
ಆದರೆ ಅದನ್ನು ಒಪ್ಪದ ಪರದೇಸಿ, “ಇಲ್ಲ ಡಾಕ್ಟರ್
ಮಳೆ ಏನೂ ಬರುತ್ತಿರಲಿಲ್ಲ. ಇಬ್ಬನಿ ಥರ
ಹನಿಯುತ್ತಿತ್ತು...” ಎಂದ.
ಮಳೆ ಏನೂ ಬರುತ್ತಿರಲಿಲ್ಲ. ಇಬ್ಬನಿ ಥರ
ಹನಿಯುತ್ತಿತ್ತು...” ಎಂದ.
ಆದರೂ, ಡಾಕ್ಟರು ಅವನಿಗೆ ಕೆಲವು ಮಾತ್ರೆಗಳನ್ನು ತಿನ್ನಿಸಿದರು. ನಂತರ ಕೆಲವು ಮಾಹಿತಿ ಇರುವ ಚಾರ್ಟ್ ಒಂದನ್ನು ತೆರೆದು ತೋರಿಸಿದರು.
“ನಮಗೆ ಕಿವಿಗಳೇ ಮುಖ್ಯ ಪರದೇಸಿ. ಏಕೆಂದರೆ, ಪ್ರತಿಧ್ವನಿಯ ಆಧಾರದ ಮೇಲೆ ನಮ್ಮ
ಆಹಾರವನ್ನು ಹುಡುಕುತ್ತೇವೆ. ಹಾಗೆಂದರೆ ಏನೆಂದು ಗೊತ್ತಾ ನಿನಗೆ,” ಎಂದರು.
ಆಹಾರವನ್ನು ಹುಡುಕುತ್ತೇವೆ. ಹಾಗೆಂದರೆ ಏನೆಂದು ಗೊತ್ತಾ ನಿನಗೆ,” ಎಂದರು.
ಗೊತ್ತಿಲ್ಲ ಎಂದು ತಲೆಯಾಡಿಸಿದ ಪರದೇಸಿ.
ಅಷ್ಟರಲ್ಲಿ ಅವನಿಗೆ ಕಿವಿ ನೋವು ತುಸು ಕಡಿಮೆಯಾಗಿ, ಆರಾಮ ಎನಿಸಿತ್ತು.
“ಕೀಟಾಹಾರಿ ಬಾವಲಿಗಳಾದ ನಾವು, ನಮ್ಮ ಮೂಗಿನ ಮೂಲಕ ಧ್ವನಿ ಸಂದೇಶ ಕಳಿಸುತ್ತೇವೆ.
ಅವು ದೂರದ ವಸ್ತುಗಳಿಗೆ ಡಿಕ್ಕಿ ಹೊಡೆದು ಪ್ರತಿಧ್ವನಿಯಾಗಿ ಹಿಂತಿರುಗುತ್ತವೆ. ಪ್ರತಿಧ್ವನಿ ತರಂಗಗಳು ಅಲ್ಲಿರುವ ವಸ್ತು ಯಾವುದು, ಹೇಗಿದೆ ಎಂಬುದನ್ನು ನಮಗೆ ಹೇಳುತ್ತವೆ,” ಎಂದು ಡಾಕ್ಟರ್ ವಿವರಿಸಿದರು.
“ಹಾಂ! ಒಂದೊಂದು ಪ್ರತಿಧ್ವನಿಯೂ ಒಂದೊಂದು ಥರ ಇರುತ್ತದೆ. ಹುಳುಗಳು ಇವೆ ಎಂದು ಪ್ರತಿಧ್ವನಿ ಹೇಳಿದರೆ, ನಾವು ಅದನ್ನು ಹಿಡಿದು ತಿನ್ನುತ್ತೇವೆ. ಅದು ಮರ ಅಥವಾ ಗೋಡೆಯಾದರೆ ನಾವು ಅದರತ್ತ ಹಾರುವುದಿಲ್ಲ,” ಎಂದ ಉಮೇದಿನಿಂದ.
No comments:
Post a Comment