ಬುದ್ದಿ ಕಲಿತ ಬಾಲಕ-
ಒಂದೂರಿನಲ್ಲಿ ಬಾಲು ಎಂಬ ಹುಡುಗನಿದ್ದ. ಅವನು ಹುಟ್ಟು ತರಲೆಯಾಗಿದ್ದ. ಯಾವಾಗಲೂ ಏನಾದರೊಂದು ಕೀಟಲೆ ಮಾಡದಿದ್ದರೆ ಅವನಿಗೆ ಸಮಾಧಾನವೇ ಆಗುತ್ತಿರಲಿಲ್ಲ. ಮನೆಯಲ್ಲಿ ಅಪ್ಪ ಅಮ್ಮನ ಮಾತನ್ನೇ ಕೇಳುತ್ತಿರಲಿಲ್ಲ! ಅವರಿಗೂ ಬುದ್ದಿ ಹೇಳಿ ಹೇಳಿ ಸಾಕಾಗಿ ಹೋಗಿತ್ತು. ಇವತ್ತು ಸರಿ ಹೋಗಬಹುದು ನಾಳೆ ಸರಿಹೋಗಬಹುದು ಎಂದು ಅವರು ಕಾದು ಕಾದು ಸುಸ್ತಾಗಿದ್ದರು. ಅಕ್ಕಪಕ್ಕದವರೆಲ್ಲಾ ಹುಡುಗಬುದ್ದಿ, ದೊಡ್ಡವನಾಗುತ್ತಾ ಸರಿ ಹೋಗುತ್ತಾನೆ ಅಂದುಕೊಳ್ಳುತ್ತಿದ್ದರು. ಬೆಳೆಯುವ ಪೈರು ಮೊಳಕೆಯಲ್ಲೆ ನೋಡು ಅಂತ ಮತ್ತೆ ಕೆಲವರು ಆಡಿಕೊಳ್ಳುತ್ತಿದ್ದರು. ಅವನ ತಂದೆ ತಾಯಿಗಳಿಗೂ ಇವನದೇ ದೊಡ್ಡ ಯೋಚನೆಯಾಗಿತ್ತು.
ಸ್ಕೂಲಿನಿಂದ ದಿನಾ ಏನಾದರೊಂದು ಇವನ ಮೇಲೆ ದೂರು ಇದ್ದದ್ದೆ. ಅವನಿಗೆ ಹೊಡೆದ, ಇವನಿಗೆ ಹೊಡೆದ ಪುಸ್ತಕ ಹರಿದ ಎಂದು ದೂರುಗಳು ಬರುತ್ತಲೇ ಇದ್ದವು. ಇಷ್ಟೆಲ್ಲಾ ತರಲೆ ಮಾಡುತ್ತಿದ್ದರೂ ಓದುವುದರಲ್ಲಿ ಮುಂದಿದ್ದ. ಆತನ ಅಪ್ಪ ಅಮ್ಮನಿಗೆ ಇವನದೇ ದೊಡ್ಡ ಯೋಚನೆಯಾಗಿತ್ತು. ಶನಿವಾರ ಬಂತೆಂದರೆ ಸಾಕು ಮಾರ್ನಿಂಗ್ ಸ್ಕೂಲ್ ಮುಗಿಸಿಕೊಂಡು ಬಂದವನೇ ಸ್ಕೂಲ್ ಯೂನಿ´‚ಾರ್ಮ್ ಸಹ ಬಿಚ್ಚದೆ ಮನೆಯ ಹತ್ತಿರವೇ ಇದ್ದ ನದಿಗೆ ಮೀನು ಹಿಡಿಯಲು ಆತನ ಗೆಳೆಯ ಸೀನನೊಂದಿಗೆ ಹೋಗುತ್ತಿದ್ದನು. ಮೀನು ಹಿಡಿದು ತರುವುದು ಮನೆಯ ತೊಟ್ಟಿಯಲ್ಲಿ ಹಾಕುವುದು ಮಾಡುತ್ತಿದ್ದ.
ಎಷ್ಟು ಹೋಗಬೇಡವೆಂದರೂ ಕೇಳುತ್ತಿರಲಿÇ್. ನದಿಯಲ್ಲಿ ಮೀನು ಹಿಡಿಯುವುದು, ಅದನ್ನು ತಂದು ಮನೆಯ ತೊಟ್ಟಿಯಲ್ಲಿ ಬಿಡುವುದು ಮಾಡುತ್ತಿದ್ದ. ಯಾವಾಗ ಇವನು ಸರಿ ಹೋಗುತ್ತಾನೋ ಎಂದು ಅವನ ತಂದೆ ತಾಯಿ ಕಾಯುವುದೇ ಆಗಿತ್ತು. ಒಂದು ದಿನ ಬಾಲುವಿನ ತಾಯಿ ಆತನನ್ನು ಕರೆದು ಅಂಗಡಿಯಿಂದ ತರಕಾರಿ ತರಲು ಹೇಳಿದರು. ಅಂಗಡಿಗೆ ಹೋಗಿ ತರಕಾರಿ ತೆಗೆದುಕೊಂಡು ಬರುತ್ತಿದ್ದ. ಸಂಜೆಯಾಗಿ ಕತ್ತಲಾಗುತ್ತಾ ಬಂದಿತ್ತು. ಇನ್ನೇನು ಮನೆ ಸ್ವಲ್ಪ ದೂರ ಇತ್ತು, ಆಗ ಕರೆಂಟ್ ಹೋಗಿ ಬೀದಿಯೆಲ್ಲಾ ಕತ್ತಲಾಯಿತು. ಮೊದಲೇ ತರಲೆ ಹುಡುಗ, ಏನಾದರೂ ಕೀಟಲೆ ಮಾಡಬೇಕೆನಿಸಿತು ಅವನಿಗೆ.
ರಸ್ತೆಗೆ ಟಾರ್ ಹಾಕಲೆಂದು ರಸ್ತೆಯ ಇಕ್ಕೆಲಗಳಲ್ಲಿ ದಪ್ಪ ದಪ್ಪ ಜಲ್ಲಿ ಕಲ್ಲುಗಳನ್ನು ಹಾಕಿದ್ದರು. ಅದನ್ನು ನೋಡಿದ್ದೇ ತಡ ಬಾಲುವಿನ ತಲೆಯಲ್ಲೊಂದು ಯೋಚನೆ ಬಂತು. ಹೇಗೂ ಕರೆಂಟ್ ಹೋಗಿ ಬೀದಿ ದೀಪಗಳು ಆರಿದ್ದವು. ರಸ್ತೆಯ ಎರಡು ಬದಿಯಲ್ಲೂ ಬರಿ ಹೆಂಚಿನ ಮನೆಗಳೇ. ಒಂದು ದಪ್ಪ ಕಲ್ಲನ್ನು ಎಸೆಯುವೆ, ಕಲ್ಲು ಬಿದ್ದರೆ ಹೆಂಚು ಒಡೆದುಹೋಗುತ್ತದೆ. ಮಳೆಗಾಲದಲ್ಲಿ ಮನೆ ಸೋರುತ್ತದೆ. ಎಂದು ಯೋಚಿಸಿದವನೇ ಒಂದು ದೊಡ್ಡ ಜಲ್ಲಿ ಕಲ್ಲನ್ನು ತೆಗೆದುಕೊಂಡು ಮೇಲೆಸೆದನು. ಕಲ್ಲು ಮನೆ ಮೇಲೆ ಬಿದ್ದು ಮನೆಯವರು ಹೊರಬರುವುದರಲ್ಲಿ ಮನೆ ಸೇರಬೇಕೆಂದು ಓಡಿದನು. ಅವನು ಓಡಿ ಸ್ವಲ್ಪ ಮುಂದೆ ಬಂದಿರಲಿÇ್ಲ, ಅವನು ಕಲ್ಲನ್ನು ಹೇಗೆ ಎಸೆದಿದ್ದನೋ? ಅವನು ಮುಂದೆ ಬಂದಾಗ ಅದು ಅವನ ತಲೆಯ ಮೇಲೆ ಬಿದ್ದು ರಕ್ತ ಬರಲಾರಂಬಿಸಿತು. ಅಯ್ಯೋ ಏನೋ ಮಾಡಲು ಹೋಗಿ ಏನೋ ಆಯಿತಲ್ಲಾ ಎಂದು ಆಳುತ್ತಾ ಮನೆಗೆ ಬಂದನು, ಅಳುತ್ತ ಬಂದ ಬಾಲುವನ್ನು ಆತನ ಅಮ್ಮ ಏನಾಯಿತೆಂದು ಕೇಳಿದರು. ಆಗ ಬಾಲು ನಡೆದದ್ದನ್ನೆಲ್ಲಾ ವಿವರಿಸಿದನು. ಆಗ ಆತನ ಅಮ್ಮ ನೋಡಿದೆಯಾ, ನೀನು ಯಾವಾಗಲೂ ಏನಾದರೊಂದು ಕೀಟಲೆ ಮಾಡುತ್ತಿರುತ್ತೀಯ. ಯಾವಾಗಲೂ ಎllarigu ಒಳ್ಳೆಯದನ್ನೇ ಬಯಸಬೇಕು. ಕೆಟ್ಟದ್ದು ಮಾಡಲು ಹೋದರೆ ನಮಗೆ ಕೆಡಕಾಗುತ್ತದೆ. ಅದಕ್ಕೆ ಇಂದಿನ ಘಟನೆಯೇ ಸಾಕ್ಷಿ. ಇನ್ನು ಮೇಲೆ ಹೀಗೆಲ್ಲಾ ಮಾಡಬೇಡ. ಎLLARINDA ಒಳ್ಳೆಯ ಹುಡುಗ ಅನ್ನಿಸಿಕೊಳ್ಳಬೇಕೆಂದರು. ಬಾಲುವಿಗೆ ತನ್ನ ತಪ್ಪಿನ ಅರಿವಾಗಿತ್ತು. ಅಂದಿನಿಂದ ಅವನು ಒಳ್ಳೆಯ ಹುಡುಗನಾಗಿ ಬಾಳಿದನು.
No comments:
Post a Comment